Tuesday, February 26, 2019

ಮಿಷನ್ ಸಕ್ಸಸ್ ಆದ ಬಳಿಕವೇ ಕಛೇರಿಯಿಂದ ಮನೆಗೆ ತೆರಳಿದ ಮೋದಿ


ನಲವತ್ತಕ್ಕೂ ಹೆಚ್ಚು ವೀರ ಭಾರತೀಯ ಸೈನಿಕರ ನಿರ್ದಾಕ್ಷಿಣ್ಯವಾಗಿ ಬಾಂಬ್ ಧಾಳಿ ಮಾಡುವ ಮೂಲಕ ಹತ್ಯೆಗೈದ ಪಾಕಿಸ್ತಾನ ಬೆಂಬಲಿತ ಜೈಷ್ ಈ ಮೊಹಮದ್ ಉಗ್ರ ಸಂಘಟನೆ ಹಾಗೂ ಇನ್ನಿತರ ಎರಡು ಪ್ರಮುಖ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ಇಂದು ನಸುಕಿನ ಜಾವ ಮೂರು ವರೆ ಗಂಟೆಯ ಸುಮಾರಿಗೆ ಭಾರತೀಯ ಹನ್ನೆರಡು ಮಿರೇಜ್ ೨೦೦೦ ಹಾಗೂ ಸುಖೋಯ್ ಯುದ್ದ ವಿಮಾನಗಳು ಧಾಳಿ ನಡೆಸಿವೆ. ಈ ಧಾಳಿಯ ವೇಳೆ ಇಪ್ಪತ್ತಕ್ಕೂ ಹೆಚ್ಚು ಉಗ್ರರ ಗುರುಗಳು ಹಾಗೂ ಮುನ್ನೂರಕ್ಕೂ ಹೆಚ್ಚು ಉಗ್ರರು ಸರ್ವನಾಶವಾಗಿದ್ದಾರೆ. ವಿಶೇಷ ಎಂದರೆ ಭಾರತೀಯ ಸೇನೆ ಹಾಗೂ ಭಾರತೀಯ ವಾಯುಸೇನೆ ಈ ಧಾಳಿ ನಡೆಸಬೇಕಾದರೆ ಇದರ ಸಂಪೂರ್ಣ ವಿವರವನ್ನು ಪ್ರಧಾನಿ ನರೇಂದ್ರ ಮೋದಿ ಪಡೆದಿದ್ದರಂತೆ.

ಭಾರತೀಯ ಸೇನೆಯ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಯುವ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳ ಕಛೇರಿಯಲ್ಲೇ ಉಳಿದಿದ್ದರು. ಬೆಳಗಿನ ಜಾವ 3:45 ರ ವರೆಗೂ ಪ್ರಧಾನಿ ಕಚೇರಿಯಲ್ಲಿ ಇದ್ದ ಮೋದಿ ಉಗ್ರರ ಮೇಲಿನ ಸೇನಾ ಧಾಳಿಯ ಪಿನ್ ಟು ಪಿನ್ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದರು. ಉಗ್ರರ ನೆಲೆಗಳು ಸಂಪೂರ್ಣವಾಗಿ ಮಟ್ಟಹಾಕಿ ಯಶಸ್ವಿಯಾದ ನಂತರ ಭಾರತೀಯ ಯುದ್ದ ವಿಮಾನಗಳು ವಾಪಸ್ ಆದ ಬಳಿಕವೇ ಮೋದಿ ತಮ್ಮ ನಿವಾಸಕ್ಕೆ ತೆರಳಿದ್ದಾರೆ.



ಈ ವೇಳೆ ಪ್ರಧಾನ ಮಂತ್ರಿಯವರ ಜೊತೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಹಿತ್ ಧೋಔಲ್ , ವಾಯು ಸೇನಾ ಮುಖ್ಯಸ್ಥರು , ಭಾರತೀಯ ಸೇನೆಯ ಅಧಿಕಾರಿಗಳು ಇದ್ದು ಧಾಳಿಯ ಸಂಪೂರ್ಣ ವಿವರವನ್ನು ನೇರವಾಗಿ ಮೋದಿಗೆ ತಲುಪಿಸಿದ್ದಾರೆ.

No comments:

Post a Comment