Thursday, March 21, 2019

5 ವರ್ಷಗಳ ನಂತರವೂ ಇಷ್ಟೊಂದು ಜನ ಬೆಂಬಲ ಹೊಂದಿರುವ ಏಕೈಕ ನಾಯಕ ಮೋದಿ ಜಿ..

ಮೋದಿ ವಿರೋಧಿ ಟೈಮ್ಸ್ ನೌ ಸಮೀಕ್ಷೆಯಲ್ಲೂ ಚೌಕಿದಾರನದ್ದೇ ದರ್ಬಾರ್! ವಿರೋಧಿಗಳೆ ಹೀಗೆ ಹೇಳುತ್ತಾರೆ ಅಂದ್ರೆ ಜೂಸ್ಟ್ ಇಮ್ಯಾಗಿನ್ ಮೋದಿ ಪವರ್ ಏನೂ ಅಂತಾ..

ಮೋದಿ….ಮೋದಿ….ಮೋದಿ…. ಇದು ೨೦೧೪ರಲ್ಲಿ ದೇಶಾದ್ಯಂತ ಕೇಳಿ ಬಂದ ಒಂದು ಕೂಗು, ಈ ಎರಡಕ್ಷರ ಯಾವ ರೀತಿ ಮ್ಯಾಜಿಕ್ ಮಾಡಿತ್ತು ಎಂದರೆ ಯಾರೊಬ್ಬರೂ ಕೂಡ ಊಹಿಸಿರಲಿಲ್ಲ ನಮ್ಮ ದೇಶದಲ್ಲಿ ಇಂತಹ ಒಂದು ಬದಲಾವಣೆ ಆಗಲಿದೆ ಎಂಬುದನ್ನು. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ನೇರವಾಗಿ ಪ್ರಧಾನಮಂತ್ರಿ ಸ್ಥಾನಕ್ಕೆ ಆಯ್ಕೆ ಆಗುತ್ತಿದ್ದಂತೆ ದೇಶದ ಜನರಲ್ಲಿ ಒಂದು ರೀತಿಯ ಸಂಚಲನ ಉಂಟಾಗಿತ್ತು.‌ ಅಂದು ಮೋದಿಯವರನ್ನು ಗೆಲ್ಲಿಸುವ ಸಲುವಾಗಿ ಪ್ರಾರಂಭವಾದ ಹೊಸ ಹೊಸ ಅಭಿಯಾನಗಳು ಇಂದಿಗೂ ಕೊನೆಗೊಳ್ಳಲಿಲ್ಲ ಎಂಬುದು ವಿಶೇಷ. ೨೦೧೪ರ ಚುನಾವಣೆ ನಡೆದು ಹೋಯಿತು ಮೋದಿ ಗೆದ್ದಿದ್ದೂ ಆಯಿತು, ಇದೀಗ ಮತ್ತೊಂದು ಚುನಾವಣೆ ಬಂದಾಯ್ತು. ದೇಶಾದ್ಯಂತ ಲೋಕಸಭಾ ಚುನಾವಣೆಯ ರಂಗು ಹೆಚ್ಚಾಗುತ್ತಿದ್ದಂತೆ ಇದೀಗ ಒಂದೊಂದೇ ಸಮೀಕ್ಷೆಗಳು ನಡೆಯುತ್ತಿದ್ದು ಫಲಿತಾಂಶ ಕಂಡು ವಿಪಕ್ಷಗಳು ದಂಗಾಗಿವೆ. ಯಾಕೆಂದರೆ ಈವರೆಗೆ ನಡೆದ ಎಲ್ಲಾ ಸಮೀಕ್ಷೆಗಳು ಕೂಡ ಮೋದಿಯೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದು ವಿಪಕ್ಷಗಳ ಮಹಾಘಟಬಂಧನ ವಿಫಲವಾಗಲಿದೆ ಎಂದು ಹೇಳಿಕೊಂಡಿವೆ.!

ಹೌದು ಈಗಾಗಲೇ ಅನೇಕ ಪ್ರತಿಷ್ಠಿತ ಮಾಧ್ಯಮಗಳು ದೇಶಾದ್ಯಂತ ಸಮೀಕ್ಷೆ ನಡೆಸಿದ್ದು ಬಹುತೇಕ ಎಲ್ಲಾ ಮಾಧ್ಯಮಗಳ ಸಮೀಕ್ಷೆ ಕೂಡ ನರೇಂದ್ರ ಮೋದಿ ಮತ್ತೊಮ್ಮೆ ದಿಗ್ವಿಜಯ ಪಡೆದು ಗೆಲ್ಲುತ್ತಾರೆ ಎಂದು ಹೇಳಿಕೊಂಡಿವೆ. ಇತ್ತೀಚಿಗೆ ರಿಪಬ್ಲಿಕ್ ರಿಪೋರ್ಟ್‌ನಲ್ಲೂ ಮೋದಿ ಪರವಾಗಿ ದೇಶದ ಜನತೆಯ ಒಲವು ಹೆಚ್ಚು ಇದೆ ಎಂಬುದು ವರದಿಯಾಗಿತ್ತು. ಇದೀಗ ಪ್ರತಿಷ್ಠಿತ ಟೈಮ್ಸ್ ನೌ ಹಾಗೂ ವಿಎಂಆರ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲೂ ಮೋದಿಗೆ ದೇಶದ ಜನತೆ ಬಹುಪರಾಕ್ ಎಂದಿದ್ದಾರೆ. ಇತ್ತ ಮೋದಿಯನ್ನು ಸೋಲಿಸಲು ವಿಪಕ್ಷಗಳು ಒಂದಾಗಿ ದೇಶಾದ್ಯಂತ ಮಹಾಘಟಬಂಧನ ನಿರ್ಮಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ಯಾವ ಶಕ್ತಿ ಪ್ರದರ್ಶನ ಕೂಡ ಮೋದಿಯವರ ಜನಪ್ರಿಯತೆಯ ಮುಂದೆ ಲೆಕ್ಕಕ್ಕೆ ಇಲ್ಲ ಎಂದು ಹೇಳಿಕೊಂಡಿದ್ದು ಇದೀಗ ವಿರೋಧಿಗಳ ಎದೆಯಲ್ಲಿ ನಡುಕ‌ ಉಂಟಾಗಿದೆ.!

ಬಹುಮತದೊಂದಿಗೆ ಅಧಿಕಾರಕ್ಕೆ ಏರುತ್ತಾರೆ ಮೋದಿ!

ಟೈಮ್ಸ್ ನೌ – ವಿಎಂಆರ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಪ್ರಕಾರ ಒಟ್ಟು ೫೪೩ ಲೋಕಸಭಾ ಕ್ಷೇತ್ರದ ಪೈಕಿ ಈ‌ ಬಾರಿಯೂ ೨೮೩ ಸ್ಥಾನಗಳನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಗೆದ್ದು ಮತ್ತೊಮ್ಮೆ ಬಹುಮತದ ಸರಕಾರ ರಚನೆ ಮಾಡಲಿದೆ ಎಂದು ಫಲಿತಾಂಶ ನೀಡಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಕೇವಲ ೧೩೫ ಕ್ಷೇತ್ರಗಳನ್ನು ಗೆದ್ದರೆ ಇತರರು ೧೨೫ ಸ್ಥಾನಗಳನ್ನು ಗೆದ್ದುಕೊಂಡು ತೃಪ್ತಿಪಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಮೋದಿ ಎದುರಾಳಿಗಳು ಮಹಾಘಟಬಂಧನ ನಿರ್ಮಿಸಿದರು ಕೂಡ ವ್ಯರ್ಥ ಎಂದು ಹೇಳಿರುವ ಸಮೀಕ್ಷೆ, ದೇಶಾದ್ಯಂತ ಮೋದಿ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ ಎಂದು ಹೇಳಿಕೊಂಡಿದೆ. ಅದೇ ರೀತಿ ಮಧ್ಯಂತರ ಬಜೆಟ್ ಮಂಡನೆ ಮತ್ತು ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡ ನಂತರ ಪ್ತಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ದೇಶದ ಜನರಿಗೆ ನಂಬಿಕೆ ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿಕೊಂಡಿದೆ.‌ಸದ್ಯ ಯಾವುದೇ ಚುನಾವಣೆ ನಡೆದರೂ ಕೂಡ ಮೋದಿಗೆ ಜನರ ಬೆಂಬಲ ಸಿಗುತ್ತದೆ ಮತ್ತು ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸ್ಪಷ್ಟ ಚಿತ್ರಣ ನೀಡಿದೆ.

ಅದೇ ರೀತಿ ದಕ್ಷಿಣ ಭಾರತದಲ್ಲೂ ಮೋದಿ ಜನಪ್ರಿಯತೆ ಹೆಚ್ಚಾಗಿದ್ದು ಈ ಬಾರಿ ಅತೀ ಹೆಚ್ಚು ಮತಗಳು ಮೋದಿ ಪರವಾಗಿ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದು ಒಟ್ಟಾರೆಯಾಗಿ ಮೋದಿ ವರ್ಚಸ್ಸಿನ ಮುಂದೆ ವಿಪಕ್ಷಗಳ ಆಟ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ. ರಾಜ್ಯವಾರು ಒಟ್ಟು ಸ್ಥಾನಗಳನ್ನು ಲೆಕ್ಕ ಹಾಕುವುದಾದರೆ ಕರ್ನಾಟಕದ ಒಟ್ಟು ೨೮ರಲ್ಲಿ ೧೫+ ಬಿಜೆಪಿಗೆ ಸಿಗಲಿದೆ ಎಂದು ಹೇಳಿಕೊಂಡಿದ್ದು ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸಿದರು ಕೂಡ ವ್ಯರ್ಥ ಪ್ರಯತ್ನ ಎಂದು ಹೇಳಲಾಗಿದೆ. ಆದ್ದರಿಂದ ಲೋಕಸಭಾ ಸಮರಕ್ಕೆ‌ ದಿನಾಂಕ ನಿಗದಿಯಾಗುತ್ತಿದ್ದಂತೆ ನಡೆಯುತ್ತಿರುವ ಎಲ್ಲಾ ಸಮೀಕ್ಷೆಗಳು ಕೂಡ ಮೋದಿಯೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿಕೊಳ್ಳುತ್ತಿರುವುದು ವಿಪಕ್ಷಗಳಿಗೆ ಭಯ ಹುಟ್ಟಿಸಿದೆ..!

No comments:

Post a Comment