Wednesday, February 27, 2019

ಬೆಂಗಳೂರಿನ ಯಲಹಂಕದಿಂದ ಯುದ್ಧ ವಿಮಾನಗಳು ಗಡಿ ಪ್ರದೇಶಕ್ಕೆ ರವಾನೆ


ಬೆಂಗಳೂರು: ಭಾರತದ ಮೇಲೆ ಪಾಕ್ ದಾಳಿಗೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಯುದ್ಧ ವಿಮಾನಗಳು ರವಾನೆಯಾಗಿದೆ.

ಈಗಾಗಲೇ ರಜೆಯಲ್ಲಿರುವ ಎಲ್ಲ ಸೈನಿಕರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮೂರು ಸೇನೆಗಳು ಸೂಚನೆ ಕೊಟ್ಟಿವೆ.

ಗಡಿಯಲ್ಲಿ ಭಾರತ ಹೈ ಅಲರ್ಟ್ ಘೋಷಿಸಿದ್ದು, ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ. ಭಾರತ ಸರ್ಕಾರ ಗಡಿಯಲ್ಲಿರುವ ನಾಗರಿಕರನ್ನು ಸುರಕ್ಷಿತ ಕಡೆಗೆ ಸಾಗಿಸುವಂತೆ ಭಾರತೀಯ ಸೇನೆಗೆ ಸೂಚಿಸಿದೆ.

ಭಾರತದ ಸರ್ಜಿಕಲ್ ಸ್ಟ್ರೈಕ್ ನಿಂದ ದಿಕ್ಕೆಟ್ಟ ಪಾಕಿಸ್ತಾನ ಈಗ ಗಡಿಯಲ್ಲಿ ಒಂದೇ ಸಮನೆ ಗುಂಡಿನ ದಾಳಿ ನಡೆಸುತ್ತಿದೆ. ಪಾಕ್ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ನಡೆಸಿ ಈಗಾಗಲೇ 5 ಸೇನಾ ಚೌಕಿಗಳನ್ನು ಧ್ವಂಸ ಮಾಡಿದೆ.

No comments:

Post a Comment