ಭಾರತೀಯ ಸೇನೆಯ ಯೋಧರನ್ನು ಹೇಡಿತನದಿಂದ ಕೊಂದು ಸುಖನಿದ್ರೆಯಲ್ಲಿದ್ದ ಉಗ್ರರನ್ನು ಭಾರತೀಯ ವಾಯು ಪಡೆ ಚಿರ ನಿದ್ರೆಗೆ ಕಳುಹಿಸಿದೆ. ಆ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದೆ. ಭಾರತಕ್ಕೆ ಭಾರತವೇ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ಕೇಳಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಎಲ್ಲವನ್ನೂ ಮರೆತವರಂತೆ ದೇಶದ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆದರೆ ಮೋದಿಯೊಳಗಿನ ಕಿಚ್ಚು ಪುಲ್ವಾಮ ದಾಳಿಯ ದಿನವೇ ಉಗ್ರ ನಿರ್ನಾಮಕ್ಕೆ ಸ್ಕೆಚ್ ಹಾಕಿತ್ತು. ಅದರ ಫಲವಾಗಿ ಭಾರತೀಯ ವಾಯು ಸೇನೆ ಪಾಕಿಸ್ತಾನದ ಗಡಿದಾಟಿ ಉಗ್ರರ ರುಂಡ ಚೆಂಡಾಡಿದೆ. ಏರ್ ಸ್ಟ್ರೈಕ್ ಎಂದು ಕರೆಯಲ್ಪಟ್ಟ ಉಗ್ರ ನಿಗ್ರಹ ಕಾರ್ಯಾಚರಣೆ ಅತ್ಯಂತ ಗೌಪ್ಯವಾಗಿ ಮತ್ತು ಉಪಾಯವಾಗಿ ನಡೆದಿತ್ತು. ಅಚ್ಚರಿಯ ವಿಷಯವೆಂದರೆ ಈ ಏರ್ ಸ್ಟ್ರೈಕ್ ಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ.
ಪುಲ್ವಾಮಾದಲ್ಲಿನ ಉಗ್ರದಾಳಿಯ ಬಳಿಕ ಪ್ರತಿಯೊಬ್ಬ ಭಾರತೀಯನಲ್ಲೂ ಕುದಿಯುತ್ತಿದ್ದ ಪ್ರತೀಕಾರಕ್ಕೆ ಭಾರತೀಯ ವಾಯುಸೇನೆ ಏರ್ಸ್ಟ್ರೈಕ್ ನಡೆಸುವ ಮೂಲಕ ಸೇಡು ತೀರಿಸಿಕೊಂಡಿದೆ. ಪಾಕಿಸ್ತಾನದ ಬಾಲಕೋಟ್ ನ ಉಗ್ರತಾಣಕ್ಕೆ ಗುರಿಯಾಗಿಸಿ ನಡೆಸಿದ ದಾಳಿ ಕೋಟಿ ಕೋಟಿ ಬೆಲೆ ಬಾಳುವಂತದ್ದಾಗಿತ್ತು ಎನ್ನುವ ಮಾಹಿತಿ ಇದೀಗ ಹೊರಬಿದ್ದಿದೆ. ಜೈಷೆ ಸಂಘಟನೆಯ ಹುಟ್ಟಡಗಿಸಲು ಸಾಕಷ್ಟು ಹಣ ಹಾಗೂ ಬುದ್ಧಿ ಖರ್ಚು ಮಾಡಿತ್ತು. ಹಲವು ಮೂಲಗಳ ಪ್ರಕಾರ ಸರ್ಕಾರ ಈ ಭರ್ಜರಿ ಆಪರೇಷನ್ ಗೆ ಖರ್ಚು ಮಾಡಿರುವ ಒಟ್ಟಾರೆ ಹಣವನ್ನು ಅಂದಾಜಿಸಲಾಗಿದೆ.
ಸಾವಿರ ಕೆಜಿಯ ಬಾಂಬ್ಗಳನ್ನು ಉಗ್ರ ನೆಲೆ ಮೇಲೆ ವಾಯುಸೇನೆ ಎಸೆದಿತ್ತು. ಪ್ರತಿಯೊಂದು ಬಾಂಬ್ಗಳ ಬೆಲೆ 56 ದಿಂದ 73.5 ಲಕ್ಷ ರೂಪಾಯಿ. ಒಟ್ಟಾರೆ ಒಂದು ಸಾವಿರ ಕೆಜಿ ತೂಕದ ಬಾಂಬ್ ಗಳನ್ನು ಭಾರತೀಯ ಸೇನೆ ಪಾಕ್ ಮೇಲೆ ಉಡಾಯಿಸಿದೆ. ಅಂದರೆ ಕೇವಲ ಬಾಂಬ್ ಗಳ ಬೆಲೆಯೇ ಸರಿ ಸುಮಾರು 560 ರಿಂದ 730 ಕೋಟಿ ರೂಪಾಯಿ ತಲುಪಿದೆ! ಕಾರ್ಯಾಚರಣೆಗಾಗಿ 6,300 ಕೋಟಿಯಷ್ಟು ವಿವಿಧ ಮಿಲಿಟರಿ ಆಸ್ತಿಯನ್ನು ಭಾರತ ಬಳಸಿತ್ತು. ಅದರಲ್ಲಿ 3,686 ಕೋಟಿಯಷ್ಟು ಮುನ್ನೆಚ್ಚರಿಕಾ ಕ್ರಮವಾಗಿ ಇರಿಸಿಕೊಳ್ಳಲಾಗಿತ್ತು.
22 ಕೋಟಿಯ ಮಿಡ್ ಏರ್ ರಿಫಿಲ್ಲಿಂಗ್ ಟ್ಯಾಂಕರ್ ಅನ್ನು ಭಾರತೀಯ ಸೇನೆ ನಿಯೋಜಿಸಿತ್ತು. 80 ಕೋಟಿ ಬೆಲೆ ಬಾಳುವ ಹೆರಾನ್ ಡ್ರೋನ್ ಸಹ ಈ ಕಾರ್ಯಾಚರಣೆಗೆ ಸಹಕಾರ ನೀಡಿತ್ತು. ರಷ್ಯಾ ನಿರ್ಮಿತ ಮೂರು ಸುಖೋಯ್ ಯುದ್ಧ ವಿಮಾನಗಳನ್ನು(358 ಕೋಟಿ) ಸಹ ಸೇನೆ ಉಪಯೋಗಿಸಿಕೊಂಡಿತ್ತು. ಐದು ಮಿಗ್(154 ಕೋಟಿ) ಅನ್ನು ಅಲರ್ಟ್ ಆಗಿರುವಂತೆ ಸೂಚಿಸಲಾಗಿತ್ತು. ಪಾಕಿಸ್ತಾನ ಸೇನೆಯ ಮೇಲೆ ತೀವ್ರ ನಿಗಾ ಇಡಲು ಕಣ್ಗಾವಲು ವಿಮಾನವನ್ನು(1750ಕೋಟಿ) 36 ಡಿಗ್ರೀ ಏರ್ಸ್ಪೇಸ್ನಲ್ಲಿ ಕಾವಲಿಗಿಡಲಾಗಿತ್ತು.
ಹನ್ನೆರಡು ಮಿರಾಜ್ 2000 ಫೈಟರ್ ಜೆಟ್(214 ಕೋಟಿ) 21 ನಿಮಿಷ ಕಾರ್ಯಾಚರಣೆ ನಡೆಸಿ ಯಾವುದೇ ತೊಂದರೆ ಇಲ್ಲದೆ ತಾಯ್ನಾಡಿಗೆ ವಾಪಸ್ ಆಗಿತ್ತು. ಹಣವೆಷ್ಟೇ ಖರ್ಚಾದರೂ ಭರಿಸುವ ತಾಕತ್ತು ಭಾರತೀಯ ಸರ್ಕಾರಕ್ಕಿದೆ. ಭಾರತಕ್ಕಿದೆ. ಪಾಕಿಸ್ತಾನದಂತಹ ಭಿಕಾರಿ ರಾಷ್ಟ್ರವಲ್ಲ ಭಾರತ. ಸರ್ಕಾರ ಒಟ್ಟು ಎಷ್ಟು ಹಣವನ್ನು ಖರ್ಚು ಮಾಡಿದೆ ಎನ್ನುವುದನ್ನ ಯೋಚಿಸುವುದಕ್ಕಿಂತಲೂ ಭಾರತ ಕೊಟ್ಟ ಪ್ರತ್ಯುತ್ತರವನ್ನು ನಾವು ಶ್ಲಾಘಿಸಬೇಕಿದೆ. ಎಲ್ಲದಕ್ಕಿಂತಲೂ ನಮ್ಮ ಸೇನೆಯ ಒಬ್ಬ ಸೈನಿಕನಿಗೂ ಸಣ್ಣಪುಟ್ಟ ಹಾನಿಯಾಗದಂತೆ ದಾಳಿ ನಡದಿದೆ. ಸೇನೆಗೊಂದು ಸಲ್ಯೂಟ್!

No comments:
Post a Comment