ಭಾರತೀಯ ಸೇನೆ ಉಗ್ರರ ಮೂರು ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ಮಾಡಿ ಅಡಗುತಾಣಗಳನ್ನು ನೆಲಸಮ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಪ್ರತಿಕಾರ ತೀರಿಸುವುದಾಗಿ ಹೇಳಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ.
ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಆಗ್ರಹಿಸಿದೆ. ಏನಾದ್ರೂ ಆಗಲಿ ಉಗ್ರರನ್ನು ಶಮನ ಮಾಡಬೇಕು. ಆದ್ರೆ ಇದರ ಬದಲು ಮಿಲಿಟರಿ ಕಾರ್ಯಾಚರಣೆ ನಡೆಸಿದ್ರೆ ಹುಷಾರ್ ಎಂದು ದೊಡ್ಡಣ್ಣ ಅಮೆರಿಕಾ ಪಾಕ್ ಗೆ ಎಚ್ಚರಿಕೆ ನೀಡಿದೆ.
ಪಾಕ್ ಉಗ್ರರ ವಿರುದ್ಧ ಇಂದು ಚೀನಾದಲ್ಲಿ ವಿದೇಶಾಂಗ ಸಚಿವರ ಮಹತ್ವದ ಸಭೆ ನಡೆಯಲಿದೆ. ಭಾರತ, ಚೀನಾ, ರಷ್ಯಾ ವಿದೇಶಾಂಗ ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಪ್ರಸ್ತಾಪಿಸಲಿದ್ದಾರೆ.
ಫೆ. 14ರಂದು ಪಾಕ್ ಉಗ್ರನ ಆತ್ಮಾಹುತಿ ದಾಳಿಯಿಂದಾಗಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು ಎಂದು ಇಡೀ ದೇಶವೇ ಒಕ್ಕೊರಲಿನಿಂದ ಆಗ್ರಹಿಸಿತ್ತು. ಈ ಘಟನೆ ನಡೆದ 13ನೇ ದಿನಕ್ಕೆ ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆ ದಾಟಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಭಯೋತ್ಪಾದಕರನ್ನು ಮಟ್ಟ ಹಾಕಿದ್ದಾರೆ. ಈ ದಾಳಿಯಲ್ಲಿ 250-300 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಉಗ್ರರನ್ನು ಚೆಂಡಾಡಿದ ಭಾರತಕ್ಕೆ ಪಾಕ್ ಚಾಲೆಂಜ್
ಆದ್ರೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಭಾರತ ಎಂಥ ದಾಳಿನೂ ಮಾಡಿಲ್ಲ. ಖಾಲಿ ಪ್ರದೇಶದಲ್ಲಿ ಕೇವಲ ಬಾಂಬ್‍ಗಳನ್ನು ಹಾಕಿ ಹೋಗಿವೆ ಅಷ್ಟೆ ಅಂತ ಪಾಕ್ ಮೇಜರ್ ಹೇಳಿದ್ದರು. ಅಲ್ಲಿನ ನಿವಾಸಿಗಳು ಮಾತ್ರ ಭಾರತ ನಡೆಸಿದ ವೈಮಾನಿಕ ದಾಳಿ ಭೂಕಂಪದಂತಿತ್ತು ಅಂತ ಹೇಳಿದ್ದಾರೆ. ಈ ಬಗ್ಗೆ ಜಮ್ಮು ಕಾಶ್ಮೀರದ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಗಡಿಗೆ ಹೊಂದಿಕೊಂಡಂತಿರುವ ಪೂಂಚ್‍ನ ಜನ ಪ್ರತಿಕ್ರಿಯಿಸಿ, ರಾತ್ರಿ ಎಲ್ಲಾ ವಿಮಾನಗಳ ಸಂಚಾರದ ಸದ್ದು ಕೇಳಿ ಭಯಭೀತರಾಗಿದ್ದೆವು. ಏನಾಗ್ತಿದ್ಯಪ್ಪ ಅಂತ ಆತಂಕದಲ್ಲಿದ್ದೆವು. ಆದ್ರೆ, ಬೆಳಗ್ಗೆ ಎದ್ದು ಟಿವಿ ನೋಡಿದಾಗ ಪಾಕಿಸ್ತಾನದ ಉಗ್ರರ ಕ್ಯಾಂಪ್‍ಗಳ ಮೇಲೆ ಸೇನೆ ಏರ್‍ಸ್ಟ್ರೈಕ್ ನಡೆಸಿದೆ ಅಂತ ಗೊತ್ತಾಯ್ತು. ಇದು ನಮ್ಮ ಹಕ್ಕು. ಅವರು ಪದೇ ಪದೇ ದಾಳಿ ಮಾಡುತ್ತಿದ್ದರೆ ನಾವೇನು ಸುಮ್ಮನೆ ಕೂರೋಕೆ ಆಗಲ್ಲ. ಪಾಕಿಸ್ತಾನದವರಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ನಮ್ಮ ಸೇನೆಯವರು ಮಾಡಿದ್ದು ಸರಿ ಅಂದ್ರು. ಇದನ್ನೂ ಓದಿ: ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು..
How to play online casino games with real money or virtual cash
ReplyDeleteOnline casinos give you a chance to play for free without ever 온라인 카지노 슬롯 머신 having to risk any real money. You can simply sign up for free and start playing games at