ರವಿ ಬೆಳೆಗೆರೆ ಕನ್ನಡದ ಖ್ಯಾತ ಪತ್ರಕರ್ತರಲ್ಲಿ ಒಬ್ಬರು. ತಮ್ಮ ಬರಹಗಳಿಂದಲೇ ರಾಜ್ಯದ ಮನಗೆದ್ದವರು ರವಿ ಬೆಳಗೆರೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯುದ್ಧಭೂಮಿಗೆ ತೆರಳಿ ಅಲ್ಲಿಂದ ನೇರ ವರದಿಗಳನ್ನು ತಮ್ಮ ಓದುಗರಿಗೆ ರವಿ ನೀಡಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಸಾಹಸಕ್ಕೆ ರವಿ ಬೆಳಗೆರೆಯವರು ಕೈಹಾಕಿದ್ದಾರೆ. ಪುಲ್ವಾಮ ದಾಳಿ ನಡೆದ ನಂತರ ರವಿ ಬೆಳಗೆರೆಯವರು ಖುದ್ದು ಪುಲ್ವಾಮಕ್ಕೆ ತೆರಳಿ ಅಲ್ಲಿಂದ ನೇರ ವರದಿಗಳನ್ನು ವೀಕ್ಷಕರಿಗೆ ಒದಗಿಸಿದ್ದಾರೆ.
ದಿಗ್ವಿಜಯ ಚಾನೆಲ್ ನ ಸಹಯೋಗದೊಂದಿಗೆ ರವಿ ಬೆಳಗೆರೆಯವರು ಪುಲ್ವಾಮದ ನೇರ ದೃಶ್ಯಾವಳಿಗಳನ್ನು, ವರದಿಗಳನ್ನು ಜನರಿಗೆ ನೀಡಿದ್ದರು. ದಿಗ್ವಿಜಯ ಚಾನೆಲ್ ಗೆ ರವಿ ಬೆಳಗೆರೆಯವರು ಸಂದರ್ಶನವೊಂದನ್ನು ನೀಡಿದ್ದು, ತಮ್ಮ ಪುಲ್ವಾಮಾ ಯಾತ್ರೆ ಹಾಗೂ ಕಾಶ್ಮೀರದ ಪರಿಸ್ಥಿತಿಗಳ ಕುರಿತು ಹಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಯುದ್ಧ ನಾವಂದುಕೊಂಡಷ್ಟು ಸುಲಭವಲ್ಲ. ಕಾಶ್ಮೀರದ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಕೈಗೆ ಸರಪಳಿ ಹಾಕಿಕೊಂಡಂತಾಗಿದೆ ಎಂದಿದ್ದಾರೆ.
ನಾವು ಪಾಕಿಸ್ತಾನಕ್ಕೆ ಏನಾದರೂ ಮಾಡಲು ಹೋದರೆ ಅದು ನಮ್ಮ ಹೊಟ್ಟೆಯನ್ನೇ ಹರಿದು ಕೊಂಡಂತೆ. ಅವರ ಮನೆಗೆ ಬೆಂಕಿ ಬಿದ್ದರೆ ನಮಗೂ ಅಪಾಯ. ಪಾಕಿಸ್ತಾನ ಒಂದು ರೋಗಗ್ರಸ್ತ ರಾಷ್ಟ್ರ ಎಂಬುದು ಇಡೀ ಪ್ರಪಂಚದಲ್ಲಿ ಎಲ್ಲಾ ರಾಷ್ಟ್ರಗಳಿಗೂ ಅರ್ಥವಾಗಿದೆ. ಪಾಕಿಸ್ತಾನದ ಸಂಪೂರ್ಣ ಸರ್ಕಾರ ಇರುವುದು ಐಎಸ್ಐ ಕೈಯಲ್ಲಿ. ಅದು ತಾನೇ ಬೆಳೆಸಿದ ಹಾವಿನ ಮರಿ. ಇಂದು ದೊಡ್ಡದಾಗಿದೆ. ಒಂದು ಕಡೆ ಮಸೀದಿ, ಇನ್ನೊ ಇನ್ನೊಂದು ಕಡೆ ಸೈನ್ಯ. ಅದರ ಮಧ್ಯೆ ಡೆಮಾಕ್ರಸಿ! ಎಲ್ಲಿದೆ ಡೆಮಾಕ್ರಸಿ? ಏನು ಡೆಮಾಕ್ರಸಿ? ಪಾಕ್ ಎಂಥ ವಂಚಕ ರಾಷ್ಟ್ರ ಎಂದರೆ ಇಸ್ಲಾಂನಲ್ಲಿ ನಿಷಿದ್ಧವಾದದ್ದೆಲ್ಲಾ ಆ ದೇಶದಲ್ಲಿದೆ ಎಂದು ರವಿ ಬೆಳಗೆರೆ ಹೇಳಿದ್ದಾರೆ.
ನಾನು ನಾಲ್ಕು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದೇನೆ. ನಾಲ್ಕು ಸಲ ಹೆಚ್ಚೆಂದರೆ ಬುರ್ಖಾ ಹಾಕಿದ್ದ ಆರೇಳು ಮಂದಿಯನ್ನು ಗಮನಿಸಿದ್ದೇನೆ. ಅಲ್ಲಿನ ಹೆಣ್ಣು ಮಕ್ಕಳು ಬುರ್ಖಾ ಹಾಕಿಕೊಳ್ಳೊಲ್ಲ. ಆರಾಮಾಗಿ ಟೈಟ್ ಟಾಪ್ ಹಾಕಿ ಜೀನ್ಸ್ ಹಾಕಿ ಸ್ಕೂಟರ್ನಲ್ಲಿ ಓಡಾಡುತ್ತಾರೆ. ಕಾರಲ್ಲಿ ಕುಳಿತು ಸಿಗರೇಟು ಸೇದುತ್ತಾರೆ. ಬಾರ್ ನಲ್ಲಿ ಹೆಂಡದ ಹೊಳೆ ಹರಿಯುತ್ತದೆ. ಏಷ್ಯಾದ ಅತಿದೊಡ್ಡ ವೇಶ್ಯಾವಾಟಿಕೆ ಕೇಂದ್ರ ಕರಾಚಿಯಲ್ಲಿದೆ. ಇದೆಲ್ಲವೂ ಇಸ್ಲಾಂನಲ್ಲಿ ನಿಷೇಧಿತ ಸಂಗತಿಗಳು ಎಂದು ಪಾಕಿಸ್ತಾನದ ವಾಸ್ತವತೆಯನ್ನು ಬಿಚ್ಚಿಟ್ಟಿದ್ದಾರೆ.
ಇವರು ಎಲ್ಲಾ ಪ್ರಯೋಗ ಮಾಡುವುದು ಅಫ್ಘಾನಿಸ್ತಾನದ ಮೇಲೆ. ಅಲ್ಲಿನ ದೊಡ್ಡ ಅಮಾಯಕರ ಮೇಲೆ. ಆವೇಶದ ಪರಮಾವಧಿಯಾಗಿರುವ ಟ್ರೈಬಲ್ ಗಳ ಮೇಲೆ ಎಕ್ಸ್ ಪೆರಿಮೆಂಟ್ ನಡೆಸುತ್ತಾರೆ. ನಾವು ಮೊದಲು ಕಾಶ್ಮೀರಿಗರಿಗೆ ನೀಡಿರುವಂತಹ ವಿಶೇಷ ಪ್ರಾತಿನಿಧ್ಯವನ್ನು ತೆಗೆಯಲೇಬೇಕು. ಅವರು ತೆರಿಗೆ ಕಟ್ಟದೆ ಎಲ್ಲ ಸೌಲಭ್ಯ ಬಳಸಿಕೊಂಡು ಆರಾಮವಾಗಿದ್ದಾರೆ. ವಿಶೇಷ ಪ್ರಾತಿನಿಧ್ಯ ತೆಗೆದರೆ ಎಲ್ಲವೂ ಸರಿಯಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ.
ಕಾಶ್ಮೀರಿಗಳಿಗೆ ಮ್ಯಾನುಫಾಕ್ಚರಿಂಗ್ ಡಿಫೆಕ್ಟ್ ಇದೆ. ಅವರನ್ನು ಯಾವ ರೀತಿಯಲ್ಲಿಯೂ ಸರಿ ಮಾಡಲು ಸಾಧ್ಯವಿಲ್ಲ. ಅವರ ಸಂಪೂರ್ಣ ಮನಸ್ಸು ಪಾಕಿಸ್ತಾನದಲ್ಲಿದೆ. ಅವರಿಗೆ ಇಂಡಿಯಾ ಬೇಡವಾಗಿದೆ. ಭಾರತದ ದುಡ್ಡು ಬೇಕಷ್ಟೆ. ಅಷ್ಟೇ ಅಲ್ಲ ಅವರು ಒಂದು ರೂಪಾಯಿಯ ತೆರಿಗೆಯನ್ನು ಕೊಡುವುದಿಲ್ಲ. ಒಂದು ಗುಂಪಿದೆ, ಮುಫ್ತಿ ಮಹಮ್ಮದ್ ತಂಡಕ್ಕೆ ಭಾರತ ಬೇಕು. ಅವರಿಗೆ ಇಲ್ಲಿ ಲಾಭವಿದೆ. ಗಿಲಾನಿ ಮತ್ತು ಇತರ ಪ್ರತ್ಯೇಕವಾದಿಗಳು ಇದ್ದಾರೆ. ಅವರು ಪಾಕಿಸ್ತಾನದ ಪರ. ಅವರಿಗೆ ಸ್ವಾತಂತ್ರ್ಯ ಬೇಕು. ಇಂಡಿಯಾ ಬೇಡ, ಪಾಕಿಸ್ತಾನವು ಬೇಡ ಎಂದು ರವಿ ಹೇಳಿದ್ದಾರೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಕೆಲವರು ಶಾಂತಿಯ ಬಗ್ಗೆ ಮಾತನಾಡುತ್ತಾರೆ. ಸೈನಿಕರ ಪರ ನಿಲ್ಲುವ ಸರ್ಕಾರದ ತೀರ್ಮಾನಕ್ಕೆ ಅಪಸ್ವರ ಎತ್ತುತ್ತಾರೆ. ಇಂಥವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ರವಿ ಬೆಳಗೆರೆಯನ್ನು ಕೇಳಿದಾಗ, ಕೆಲವು ಅಲ್ಲ ಒಂದು ಪರ್ಟಿಕ್ಯುಲರ್ ಗ್ರೂಪ್ ಇದೆ. ಅವರನ್ನು ಅರುಂಧತಿ ರಾಯ್ ಮಕ್ಕಳು ಎಂದು ನಾನು ಕರೆಯುತ್ತೇನೆ. ಅವರಿಗೆ ನಾವು ಏನು ಮಾಡಿದರೂ ತಪ್ಪು. 40 ಸೈನಿಕರನ್ನು ಕೊಂದಿದ್ದಾರೆ. ಪ್ರತೀಕಾರ ತೀರಿಸಿಕೊಳ್ಳಬೇಕಿದೆ. ಆದರೆ ಮಾನವ ಹಕ್ಕಿನ ಉಲ್ಲಂಘನೆ ಎಂದು ಕೂಗಾಡುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈಗ ಹ್ಯೂಮನ್ ರೈಟ್ ಬಗ್ಗೆ ಮಾತನಾಡಿದರೆ ಸೈನಿಕರು ತಕ್ಕ ಉತ್ತರ ನೀಡುತ್ತಾರೆ. ಕಾಮನ್ ಮ್ಯಾನ್ ಗೆ ನೋವಾದರೆ ನಾನು ಪ್ರಶ್ನಿಸುವೆ, ಖಂಡಿಸುವೆ, ವಿರೋಧಿಸುವೆ. ಕಣ್ಣೆದುರೇ ಕಾಣಿಸುತ್ತಿರುವ ದುಷ್ಟರನ್ನು ಏನು ಮಾಡಬೇಕು? ಈ ವಿಚಾರದಲ್ಲಿ ಆದರ್ಶವಾಗಬೇಕಾಗಿದ್ದು ಇಸ್ರೇಲ್. ಇಸ್ರೇಲ್ ನಲ್ಲಿ ಒಬ್ಬರಿಗೆ ತೊಂದರೆಯಾದರೆ ಅವರು ಎಲ್ಲರನ್ನೂ ಗುರಿಯಾಗಿಸಿ ದಾಳಿ ಮಾಡೋದಿಲ್ಲ. ಹುಡುಕಾಡಿ ಹುಡುಕಾಡಿ ಯಾರನ್ನು ಹೊಡೆಯಬೇಕು ಅವರನ್ನೇ ಸಾಯಿಸಿ ಬರುತ್ತಾರೆ ಎಂದಿದ್ದಾರೆ.
ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಮಾಡಿಸಿದ್ದರು. ಇದೀಗ ಇಸ್ರೇಲ್ ನ ಮೊಸಾದ್ ನಂತೆ ದೊಡ್ಡ ಮಿಲಿಟರಿ ಪ್ಲಾನ್ ಮಾಡಲಿ. ಮೋದಿ ಅವರ ಆತ್ಮ ಅಂತರಾತ್ಮ ಏನಿದೆಯೋ ನನಗೆ ಗೊತ್ತಿಲ್ಲ. ನಾನು ಬಿಜೆಪಿಯ ಲವರ್ ಅಲ್ಲ. Pro-Modi ಅಲ್ಲ. ಆದರೆ Pro-My PM. ಇಂಡಿಯನ್ ಆರ್ಮಿ ಮತ್ತು ಅದರ ತಾಕತ್ತನ್ನು ಪ್ರಶ್ನೆ ಮಾಡುವಂತಿಲ್ಲ. We can face anything, anybody. ಅಂದಿನ ಪರಿಸ್ಥಿತಿ ಈಗಿಲ್ಲ. ಈಗ ಯಾವುದೇ ಪರಿಸ್ಥಿತಿ ಎದುರಿಸುವ ತಾಕತ್ತು ಭಾರತಕ್ಕಿದೆ ಎಂದು ಭಾರತೀಯ ಸೇನೆಯ ಬೆಂಬಲಕ್ಕೆ ನಿಂತಿದ್ದಾರೆ.
ಪುಲ್ವಾಮಾ ಘಟನೆ ಆದ ಮೇಲೆ ಮೋದಿ ಆಡಳಿತ ಹಾಗೂ ಓಪನ್ ಸ್ಟೇಟ್ ಮೆಂಟ್ ಗಳನ್ನು ಗಮನಿಸಿದ್ದೇನೆ. ಡು ರಿಯಾಕ್ಟ್, ಡು ಸರ್ಚ್, ಡು ಫೈರ್ ಎಂದು ಸೈನಿಕರಿಗೆ ಹೇಳಿದ್ದಾರೆ. ಈಗ ಸೈನಿಕರು ಮನೆಮನೆಗೆ ನುಗ್ಗುತ್ತಿದ್ದಾರೆ. ಕಣ್ಣಾರೆ ನಾನು ನೋಡಿದ್ದೇನೆ. ಈಚೆಗೆ ಎಳೆಯುತ್ತಿದ್ದಾರೆ. ಯಾರನ್ನೂ ಬಿಡುತ್ತಿಲ್ಲ. ಯಾರಿಗೂ ಕೇರ್ ಮಾಡುತ್ತಿಲ್ಲ. ಐ ಥಿಂಕ್ ಇವತ್ತಿನ ಸಮಸ್ಯೆಯನ್ನು ಮೋದಿ ಸರ್ಕಾರ ಮತ್ತು ವಯಕ್ತಿಕವಾಗಿ ಮೋದಿಯವರು ಅತ್ಯಂತ ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದು ಕಾಶ್ಮೀರದ ಪರಿಸ್ಥಿತಿಗಳನ್ನು ರವಿ ಬೆಳಗೆರೆಯವರು ವಿವರಿಸಿದ್ದಾರೆ.
No comments:
Post a Comment