ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ದಾಳಿಯಿಂದ ಭಾರತೀಯ ಸೇನೆಯ ಸಿಆರ್ಪಿಎಫ್ ಯೋಧರು ಹುತಾತ್ಮರಾದ ಬಳಿಕ ಭಾರತ ಹಾಗೂ ಪಾಕಿಸ್ಥಾನದಲ್ಲಿ ಯುದ್ಧದ ವಾತವರಣ ನಿರ್ಮಾಣವಾಗಿದ್ದು ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿಯೇ ಬಾಂಗ್ಲಾದೇಶದಲ್ಲಿ ವಿಮಾನವವೊಂದನ್ನು ಉಗ್ರರು ಹೈಜಾಕ್ ಮಾಡಲು ಪ್ರಯತ್ನಿಸಿರುವುದು ಆತಂಕಕ್ಕೆ ಕಾರಣವಾಗಿದ್ದು, ದುಬೈ ಮೂಲದ ಬಾಂಗ್ಲಾದೇಶದ ಪ್ರಯಾಣಿಕ ವಿಮಾನವನ್ನು ಹೈಜಾಕ್ ಮಾಡಲು ಪ್ರಯತ್ನಿಸಿದ ಉಗ್ರನನ್ನು ಬಾಂಗ್ಲಾದ ಭದ್ರತಾ ಪಡೆಗಳು ಬಂಧಿಸಿ ಈ ವಿಮಾನ ಅಪಹರಣ ಯತ್ನವನ್ನು ವಿಫಲಗೊಳಿಸಿದೆ.
ಬಾಂಗ್ಲಾದೇಶದ ರಾಜಧಾನಿ ಡಾಕಾದಿಂದ ದುಬೈಗೆ ಪ್ರಯಾಣ ಬೆಳೆಸಿದ್ದ ಈ ಬಿಜಿ 147 ವಿಮಾನ ಅಪಹರಣದ ಮುನ್ಸೂಚನೆ ಸಿಗುತ್ತಿದ್ದಂತೆ ಬಾಂಗ್ಲಾದ ಚಿತ್ತಗಾಂಗ್ ಶಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿ ಪ್ರಯಾಣಿಕರನ್ನು ರಕ್ಷಿಸಿ ಓರ್ವ ಬಂದೂಕುಧಾರಿ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಯಲ್ಲಿ ಬಿಜಿ 147 ವಿಮಾನದ ಓರ್ವ ಸಿಬ್ಬಂದಿ ಹತರಾಗಿದ್ದಾರೆ. ಈ ವಿಮಾನದಲ್ಲಿ ಸುಮಾರು 145 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಇವರು ಇದೀಗ ಸುರಕ್ಷಿತರಾಗಿ ಇದ್ದಾರೆ ಎನ್ನುವ ಮಾಹಿತಿಗಳು ಹೊರಬಿದ್ದಿವೆ. ಇಂದು ಸಾಯಂಕಾಲ ಸುಮಾರು 5.15 ಕ್ಕೆ ಈ ಘಟನೆ ನಡೆದಿದ್ದು, ಬಾಂಗ್ಲಾದ ರ್ಯಾಪಿಡ್ ಫೋರ್ಸ್ ಅಧಿಕಾರಿಗಳು ಹಾಗೂ ಅಲ್ಲಿನ ಪೊಲೀಸರು ಸೂಕ್ತ ಕಾರ್ಯಾಚರಣೆ ನಡೆಸಿ ಭಾರಿ ದುಷ್ಕ್ರತ್ಯವನ್ನು ವಿಫಲಗೊಳಿಸಿದ್ದಾರೆ.
No comments:
Post a Comment