ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪಾಕಿಸ್ತಾನಕ್ಕೆ ಒಂದೊಂದೇ ಏಟು ನೀಡುತ್ತಿರುವ ಭಾರತ ಇಂದು ಬೆಳಗಿನ ಜಾವ ಮುಟ್ಟಿನೋಡಿಕೊಳ್ಳುವಂತಹ ಏಟು ಕೊಟ್ಟಿದೆ.
ರೊಚ್ಚಿಗೆದ್ದಿದ್ದ ಭಾರತೀಯ ಸೇನೆ ಪುಲ್ವಾಮ ದಾಳಿ ನಡೆದ 12 ದಿನದಲ್ಲೇ ಕಾರ್ಯಾಚರಣೆ ನಡೆಸಿ ಪ್ರತಿಕಾರ ತೀರಿಸಿಕೊಂಡಿದ್ದು, ಪಾಕಿಸ್ತಾನ ಬೆಚ್ಚಿಬಿದ್ದಿದೆ.
45 ನಿಮಿಷ ನಡೆದ ಏರ್ ಸ್ಟ್ರೈಕ್ ಕಾರ್ಯಾಚರಣೆಯಲ್ಲಿ ಪಾಕ್ ಗಡಿಯಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಪಂಜಾಬ್ ನ ಆದಂಪುರ ವಾಯುನೆಲೆಯಿಂದ ಆಪರೇಷನ್ ಶುರುವಾಗಿದ್ದು, ಲೇಸರ್ ನಿಯಂತ್ರಿತ ಬಾಂಬ್ ಬಳಸಲಾಗಿದೆ. ಮಿರಾಜ್ ಯುದ್ಧ ವಿಮಾನಗಳು 40 ನಿಮಿಷಗಳಲ್ಲಿ ಕಾರ್ಯಾಚರಣೆ ಮುಗಿಸಿ ವಾಪಸ್ ಆಗಿವೆ. ಪಾಕಿಸ್ತಾನದ ವಾಯುಪಡೆ ರೇಡಾರ್ ಕಣ್ಣು ತಪ್ಪಿಸಿ ಭಾರತೀಯ ವಾಯುಪಡೆ ಕಾರ್ಯಾಚರಣೆ ನಡೆಸಿದೆ.
ಭಾರತೀಯ ಸೇನೆ ಉಗ್ರರ ಅಡಗು ತಾಣಗಳನ್ನು ಧ್ವಂಸಗೊಳಿಸಿದ್ದು, ಪಾಕಿಸ್ತಾನ ದಾಳಿ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಭಾರತದ ವಿಮಾನಗಳು ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸಿವೆ ಎಂದಷ್ಟೇ ಹೇಳಿದೆ.

No comments:
Post a Comment