ಬಲೆಗೆ ಬಿದ್ದ ನಿರಾವ್ ಮೋದಿ, ಭಯಕ್ಕೆ ಬಿದ್ದ ವಿರೋಧಿ ಪಕ್ಷಗಳು. ಮೈ ಭಿ ಚೌಕೆದಾರ್ ನಂತರ ಮೊತೊಂದು ಹೊಡೆತಕ್ಕೆ ಸಿಲುಕಿದ ವಿರೋಧ ಪಕ್ಷಗಳು😂😂😂
ಬೆಂಗಳೂರು: ಭಾರತದಲ್ಲಿ ಹಲವಾರು ಬ್ಯಾಂಕುಗಳಿಗೆ ಮಣ್ಣೆರಚಿ, ಬಹುಕೋಟಿ ರೂಪಾಯಿಯನ್ನು ವಂಚಿಸುವ ಮೂಲಕ ಭಾರತ ಬಿಟ್ಟು ಓಡಿ ಹೋಗಿದ್ದ ನೀರವ್ ಮೋದಿಗೆ ಇದೀಗ ಆಘಾತ ಎದುರಾಗಿದೆ. ಹಲವಾರು ದಿನಗಳಿಂದ ತಲೆ ಮರೆಸಿಕೊಂಡಿದ್ದ ನೀರವ್ ಮೋದಿಯು ಈ ಹಿಂದೆ ಲಂಡನ್ ನಗರದಲ್ಲಿ ಕಾಣಿಸಿಕೊಂಡ ವೀಡಿಯೋ ವೈರಲ್ ಆಗಿತ್ತು. ಇನ್ನು ಈ ವೀಡಿಯೋ ಬಂದಿದ್ದೇ ತಡ ಭಾರತದ ಜಾರಿ ನಿರ್ದೇಶನಾಲಯ ಲಂಡನ್ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ನೀರವ್ ಮೋದಿಯ ಬಂಧನಕ್ಕೆ ಸಹಕಾರ ಕೋರಿದ್ದವು.
ಇದಾದ ನಂತರ ಭಾರತ ಸರ್ಕಾರವು, ನೀರವ್ ಮೋದಿಯನ್ನು ಬಂಧಿಸಲು ಇಂಗ್ಲೆಂಡ್ ಗೆ ಮನವಿ ಸಲ್ಲಿಸಿತ್ತು. ಇನ್ನು ಭಾರತದ ಮನವಿ ಮೇರೆಗೆ, ಲಂಡನ್ ನ್ಯಾಯಾಲಯವು ನೀರವ್ ಮೋದಿಯನ್ನು ಬಂಧಿಸಲು ಆದೇಶ ಹೊರಡಿಸಿತ್ತು. ಇನ್ನು ಅದರಂತೆ ಲಂಡನ್ ಪೋಲಿಸರು ಇಂದು ನೀರವ್ ಮೋದಿಯನ್ನು ಬಂಧಿಸಿದ್ದು, ಸಂಜೆಯೊಳಗೆ ವೆಸ್ಟ್ ಮಿನಿಸ್ಟರ್ ಕೋರ್ಟ್ ಗೆ ಕರೆದುಕೊಂಡು ಹೋಗಬಹುದು ಎನ್ನಲಾಗಿದೆ.
No comments:
Post a Comment