Saturday, March 16, 2019

ಚೌಕೆದಾರ್ ಚೋರ್ ಹೈ ಅನೂ ರಾಹುಲ್ ಗಾಂಧಿಯ ಘೋಷಣೆಅನು ತಿರುಗಿಸಿ ರಾಹುಲ್ ಗಾಂಧಿಯ ಬುಡಕ್ಕೆ ನುಗಿಸಿದ್ದ ಮೋದಿ ಜಿ..


ದೇಶದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಯಾವ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ದೇಶದ್ರೋಹಿಗಳು ಖಂಡಿತ ದೇಶ ಬಿಡಲೇಬೇಕು. ಯಾಕೆಂದರೆ ಅಧಿಕಾರ ವಹಿಸಿಕೊಂಡ ನಂತರ ಮೋದಿ ಈವರೆಗೆ ಅಂದರೆ ಕಳೆದ ೫ ವರ್ಷಗಳಲ್ಲಿ ಕೈಗೊಂಡ ಎಲ್ಲಾ ನಿರ್ಧಾರ ಮತ್ತು ಯೋಜನೆಗಳು ಯಾವ ರೀತಿ ಯಶಸ್ವಿಯಾಗಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಯಾವ ರೀತಿ ಎಂದರೆ ಮೋದಿಯನ್ನು ವಿರೋಧಿಸುವ ಕೆಲ ವಿರೋಧಿಗಳು ಪ್ರತಿಯೊಂದು ಹೆಜ್ಜೆಯನ್ನೂ ವಿರೋಧಿಸುತ್ತಾರೆ. ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಭರ್ಜರಿ ತಯಾರಿ ಆರಂಭಿಸಿದ ರಾಜಕೀಯ ಪಕ್ಷಗಳು ಇದೀಗ ದೇಶಾದ್ಯಂತ ಹೊಸ ಹೊಸ ಅಭಿಯಾನ ಆರಂಭಿಸಿ ಮತಬೇಟೆಗೆ ಸಿದ್ಧತೆ ನಡೆಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ವಿಪಕ್ಷಗಳು ಯಾವ ವಿಚಾರವನ್ನು ಹಿಡಿದುಕೊಂಡು ಮೋದಿಯನ್ನು ಟೀಕಿಸುತ್ತಿದ್ದರೋ ಅದನ್ನೇ ತನ್ನ ಪ್ರಚಾರಕ್ಕೆ ಬಳಸಿಕೊಂಡ ಮೋದಿ ಅಭಿಮಾನಿಗಳು ಚೌಕಿದಾರ್ ಶೇರ್ ಹೈ ಎಂದು ದೇಶಾದ್ಯಂತ ಹೊಸ ಘೋಷಣೆಯನ್ನೇ ಹರಡಿಸಿದ್ದರು.

ಇದೀಗ ಸ್ವತಃ ಪ್ರಧಾನಿ ಮೋದಿಯೇ ದೇಶಾದ್ಯಂತ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದು ” ಮೈ ಬೀ ಚೌಕಿದಾರ್” ಎಂದು ಟ್ವಿಟರ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಮತ್ತು ಹೊಸ‌ಹೊಸ ಯುವ ಸಂಘಟನೆಗಳು ಬೀದಿಗಳಿದು ಪ್ರಚಾರ ಕಾರ್ಯ ಆರಂಭಿಸಿದ್ದು ಮೋದಿ ಮತ್ತೊಮ್ಮೆ ಎಂಬ ಘೋಷವಾಕ್ಯ ಮೊಳಗಿಸಿದ್ದಾರೆ. ಆದರೆ ಇದೀಗ ಸ್ವತಃ ಮೋದಿಯೇ ಒಂದು ಹೊಸ‌ ಅಭಿಯಾನ ಆರಂಭಿಸಿದ್ದು, ಪ್ರತಿಯೊಬ್ಬ ಪ್ರಜೆ ಕೂಡ ದೇಶ ಕಾಯುವ ಕಾವಲುಗಾರನಾಗಬೇಕು ಎಂದು ಮೋದಿ ಕರೆ ಕೊಟ್ಟಿದ್ದಾರೆ. ಈ ಮೂಲಕ ಅಧಿಕೃತವಾಗಿ ಚಾಲನೆ ನೀಡಿದ ಮೋದಿ ದೇಶಾದ್ಯಂತ ಹೊಸ‌ ಸಂಚಲನ ಮೂಡಿಸಿದ್ದಾರೆ.!

ಭ್ರಷ್ಟಾಚಾರದ ವಿರುದ್ಧ ಹೋರಾಡೋಣ – ದೇಶ ಕಾಯುವ ಕಾವಲುಗಾರ ಆಗೋಣ!

ಮೋದಿ‌ ಅಧಿಕಾರ ವಹಿಸಿಕೊಂಡ ದಿನದಿಂದಲೇ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಾ ಬಂದಿದ್ದಾರೆ. ಅದೇ ರೀತಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಅನೇಕ ದಿಟ್ಟ ನಿರ್ಧಾರ ಕೈಗೊಂಡು ಭ್ರಷ್ಟರನ್ನು ಸೆದೆಬಡಿದ ಪ್ರಧಾನಿ ಇದೀಗ ಹೊಸ ಘೋಷಣೆಯೊಂದನ್ನು ಮೊಳಗಿಸಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಕೇವಲ ಮೋದಿಯಿಂದ ಮಾತ್ರ ಸಾಧ್ಯವಿಲ್ಲ ಎಂದಿರುವ ಮೋದಿ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ ಮತ್ತು ಭ್ರಷ್ಟರನ್ನು ಈ ದೇಶದಿಂದ ಕಿತ್ತೆಸೆಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ. ಚುನಾವಣೆಯ ಹೊಸ್ತಿಲಲ್ಲೇ ಮೋದಿ ಇಂತಹ ಒಂದು ಅಭಿಯಾನ ಆರಂಭಿಸಿದ್ದು ಉತ್ತಮ‌ ಸ್ಪಂದನೆ ಕೂಡ ಸಿಕ್ಕಿದೆ ಮತ್ತು ಈ ಅಭಿಯಾನ ಕಂಡು ವಿಪಕ್ಷಗಳಿಗೆ ತಲೆನೋವಾಗಿದ್ದು ದಿನೇ ದಿನೇ ಮೋದಿ ಜನಪ್ರಿಯತೆ ಹೆಚ್ಚಾಗುತ್ತಿರುವುದು ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.!

ನರೇಂದ್ರ ಮೋದಿಯವರು ಏನೇ ಮಾಡಿದರು ಅದನ್ನು ವಿಪಕ್ಷಗಳು ವಿರೋಧಿಸುತ್ತವೆ, ಆದರೆ ಸದ್ಯ ಮೋದಿ ಆರಂಭಿಸಿದ ಅಭಿಯಾನವನ್ನು ಯಾರು ವಿರೋಧಿಸಲು ಸಾದ್ಯವಿಲ್ಲ ಯಾಕೆಂದರೆ ಮೋದಿ ಟಾರ್ಗೆಟ್ ಮಾಡಿಕೊಂಡಿರುವುದು ಭ್ರಷ್ಟಾಚಾರದ ವಿರುದ್ಧ. ಭ್ರಷ್ಟಾಚಾರದ ಪರವಾಗಿ ಯಾರೂ ಕೂಡ ಮಾತನಾಡುವ ಧೈರ್ಯ ತೋರುವುದಿಲ್ಲ, ಒಂದು ವೇಳೆ ಮೋದಿಯನ್ನು ವಿರೋಧಿಸುವ ಭರದಲ್ಲಿ ಭ್ರಷ್ಟಾಚಾರದ ಪರವಾಗಿ ಮಾತನಾಡಿದರೆ ದೇಶಾದ್ಯಂತ ಆತನ ಮರ್ಯಾದೆ ಹರಾಜಾಗುತ್ತದೆ. ಆದ್ದರಿಂದ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಅದ್ಭುತ ಎಂದೇ ಹೇಳಲಾಗುತ್ತಿದೆ..!

No comments:

Post a Comment