Tuesday, March 19, 2019

ಚೌಕಿದರ್ ಬಹುತ್ ಚಲಾಕ್ ನಿಕಲಾ.. ರಾಹುಲ್ ಗಾಂಧಿಯ ಘೋಷಣೆ ತಿರುಗಿಸಿ ರಾಹುಲ್ ಗಾಂಧಿಯ ಬುಡಕ್ಕೆ ನುಗಿಸಿದ್ದ ಮೋದಿ ಜಿ 😂😂😂


ದೇಶಾದ್ಯಂತ ಇಂತಹ ಒಂದು ಸಂಚಲನ ಸೃಷ್ಟಿಸುತ್ತಾನೆ‌ ಎಂದರೆ ಆತನಲ್ಲಿ ಇರುವ ಆ ವಿಶೇಷ ಶಕ್ತಿಯನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕು. ಹೌದು ಪ್ರಧಾನಿ ನರೇಂದ್ರ ಮೋದಿ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ವೇ ಅಲ್ಲ, ಯಾಕೆಂದರೆ ಒಬ್ಬನನ್ನು ಉಳಿಸಿಕೊಳ್ಳಲು ಇಂದು ಕೋಟ್ಯಾಂತರ ಜನರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ ಎಂದರೆ ಮೋದಿ ಒಬ್ಬ ವಿಶೇಷ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ಮೋದಿ ಮಾಡಿದ್ದೇ ಕೆಲಸ, ನಡೆದದ್ದೇ ದಾರಿ, ಆಡಿದ್ದೇ ಮಾತು ಎಂಬಂತಾಗಿದೆ ಸದ್ಯದ ಪರಿಸ್ಥಿತಿ. ಮೋದಿ ಏನೇ ಮಾಡಿದರು ಯುವಕರು ಮತ್ತು ದೇಶಪ್ರೇಮಿಗಳು ಮೋದಿಯನ್ನು ಹಿಂಬಾಲಿಸುತ್ತಾರೆ ಮತ್ತು ಮೋದಿಯವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ. ಇದು ಓರ್ವ ನಾಯಕನಿಗೆ ಇರಬೇಕಾದ ನಾಯಕತ್ವದ ಗುಣ. ವಿಪಕ್ಷಗಳು ಎಲ್ಲಾ ಒಟ್ಟಾಗಿ ನರೇಂದ್ರ ಮೋದಿಯವರನ್ನು ಸೋಲಿಸಲು ಪ್ರಯತ್ನಿಸುತ್ತಿದ್ದರೆ ಇತ್ತ ದೇಶದ ಬಗ್ಗೆ ಚಿಂತನೆ ನಡೆಸುವ ಜನರು ಮೋದಿಯನ್ನು ಮತ್ತೊಮ್ಮೆ ಗೆಲ್ಲಿಸಲು ಪಣತೊಟ್ಟಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯ ಆಟ ನಿಜಕ್ಕೂ ಬಲು ರೋಚಕ, ಯಾಕೆಂದರೆ ಓಬ್ಬನನ್ನು ಸೋಲಿಸಲು ಇಪ್ಪತ್ತಕ್ಕೂ ಹೆಚ್ಚು ಪಕ್ಷಗಳು ಒಂದಾಗಿ ಯುದ್ದಭೂಮಿಗೆ ಇಳಿದಿದೆ. ಮೋದಿ ಸೈನ್ಯ ಕೂಡ ಎಲ್ಲದಕ್ಕೂ ಸಜ್ಜಾಗಿದ್ದು ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್‌ಗೆ ಭಾರೀ ಆಘಾತ ಉಂಟು ಮಾಡಿದೆ.!

ನರೇಂದ್ರ ಮೋದಿಯವರ ಪ್ರತೀ ಹೆಜ್ಜೆಯನ್ನೂ ವಿರೋಧಿಸುವ ವಿಪಕ್ಷಗಳು ಮೋದಿ ಒಬ್ಬ ಕಳ್ಳ ಎಂದು ಕೀಳಾಗಿ ವ್ಯಂಗ್ಯವಾಡಿದ್ದರು. ದೇಶ ಕಾಯಬೇಕಾದ ಪ್ರಧಾನಿಯೇ ದೇಶವನ್ನು ಲೂಟಿ ಮಾಡುತ್ತಿದ್ದರೆ ಮತ್ತು ತನ್ನ ಆಪ್ತರಿಗೂ ದೇಶದ ಸಂಪತ್ತು ಲೂಟಿ ಮಾಡಲು ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿ “ಚೌಕಿದಾರ್ ಚೋರ್ ಹೈ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನ ಆರಂಭಿಸಿ ದೇಶಾದ್ಯಂತ ಸದ್ದು ಮಾಡಲು ಪ್ರಯತ್ನಿಸಿದ್ದರು. ಆದರೆ ಕಾಂಗ್ರೆಸ್‌ ಮಾಡಿದ ಈ‌ ಒಂದು ಆರೋಪವನ್ನೇ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಮೋದಿ ಇಂದು ಪ್ರತಿಯೊಬ್ಬರ ಮನಸ್ಸಿನಲ್ಲೂ ಬಂದು ನಿಂತಿದ್ದಾರೆ. ವಿಪಕ್ಷಗಳು ಅದೆಷ್ಟೇ ಪ್ರಯತ್ನಿಸಿದರೂ ಕೂಡ ಮೋದಿಯವರನ್ನು ಮಣಿಸಲು ಸಾಧ್ಯವಾಗದೇ ಇದ್ದಾಗ ಅತೀ ಕೀಳು ಮಟ್ಟಕ್ಕೆ ಬಂದ ಕಾಂಗ್ರೆಸ್‌ ಮೋದಿ ಕಳ್ಳ ಮೋದಿ ಕಳ್ಳ ಎಂದು ಹೇಳುತ್ತಾ ಸ್ವತಃ ರಾಹುಲ್ ಗಾಂಧಿಯವರೇ ಸುತ್ತಾಡತೊಡಗಿದರು. ಆದರೆ ಕಾಂಗ್ರೆಸ್‌ ಯಾವ ರೀತಿ ಮೋದಿಗೆ ಖೆಡ್ಡಾ ತಯಾರಿಸಿತ್ತೋ ಇದೀಗ ಆ ಖೆಡ್ಡಾದಲ್ಲಿ ಸ್ವತಃ ಕಾಂಗ್ರೆಸ್‌ ಬಿದ್ದು ಹೊರಳಾಡುತ್ತಿದೆ.!

ಹೌದು 2014ರಲ್ಲಿ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ ಮೋದಿ ಒಬ್ಬ ಚಾಯ್‌ವಾಲಾ ಎಂದು ನಿಂದಿಸಿ ಮೋದಿಯವರ ವರ್ಚಸ್ಸು ಕಡಿಮೆ ಮಾಡಲು ಪ್ರಯತ್ನಿಸಿತ್ತು, ಆದರೆ ಬಿಜೆಪಿ ಚಾಯ್‌ವಾಲಾ ಎಂಬ ಹೆಸರನ್ನೇ ಬಳಸಿಕೊಂಡು ದೇಶಾದ್ಯಂತ ಮೋದಿ ಪರವಾಗಿ ಪ್ರಚಾರ ಮಾಡಿ ಹೊಸ ಸಂಚಲನ ಉಂಟುಮಾಡಿತ್ತು. ದೇಶದ ಪ್ರತಿಯೊಬ್ಬರ ಬಾಯಲ್ಲೂ ಚಾಯ್‌ವಾಲಾ ಮೋದಿ ಎಂಬ ಮಾತು ಕೇಳಿ ಬರತೊಡಗಿತ್ತು. ಇದು ಕಾಂಗ್ರೆಸ್‌ ಪ್ರಾರಂಭಿಸಿದ ಅಭಿಯಾನ ಆದರೂ ಉಪಯೋಗವಾಗಿದ್ದು ಮಾತ್ರ ಬಿಜೆಪಿಗೆ. ಇದೀಗ ಮತ್ತೆ ಕಾಂಗ್ರೆಸ್‌ ಮತ್ತೊಂದು ಅಭಿಯಾನ ಆರಂಭಿಸಿ ತಲೆಗೆ ಕೈ ಹೊತ್ತು ಕೂರುವಂತಾಗಿದೆ. ಯಾಕೆಂದರೆ “ಚೌಕಿದಾರ್ ಚೋರ್ ಹೈ” ಎಂದು ಮೋದಿಯ ಮೇಲೆ ಹೊಸ ಬಾಣ ಪ್ರಯೋಗ ಮಾಡಿದ ಕಾಂಗ್ರೆಸ್‌ಗೆ ತನ್ನ ಬಾಣವೇ ಎದೆಗೆ ಚುಚ್ಚುವಂತಾಗಿದೆ.

ಯಾವಾಗ ಕಾಂಗ್ರೆಸ್‌ ಮೋದಿಯನ್ನು ಟೀಕಿಸಲು ಚೌಕಿದಾರ್ ಚೋರ್ ಹೈ ಎಂಬ ಪದ ಉಪಯೋಗ ಮಾಡಿತ್ತೋ ಆಗಲೇ ದೇಶದ ಜನರು ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದಿದ್ದರು. ಪ್ರಧಾನಮಂತ್ರಿಯನ್ನು ಕಳ್ಳ ಎಂದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನ ಆರಂಭಿಸಿದರು. ಚೌಕಿದಾರ್ ಶೇರ್ ಹೈ ಎಂದು ಅಭಿಯಾನ ಆರಂಭಿಸಿ ಮೋದಿ ವಿರೋಧಿಗಳಿಗೆ ಸಖತ್ ಟಾಂಗ್ ನೀಡಿದ್ದರು. ಆದರೆ ಇದೀಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ “ಮೈ ಭೀ ಚೌಕಿದಾರ್ ಹೂ” ಎಂಬ ಟ್ವಿಟರ್ ಅಭಿಯಾನ ಆರಂಭಿಸಿದ್ದು ಇದೀಗ ದೇಶಾದ್ಯಂತ ಮಾತ್ರವಲ್ಲದೆ ವಿದೇಶದಲ್ಲೂ ಈ ಟ್ರೆಂಡ್ ಚಾಲ್ತಿಯಲ್ಲಿದೆ.

“ನಮೋ” ಎಂದು ಹೇಳುತ್ತಿದ್ದ ಮೋದಿ ಅಭಿಮಾನಿಗಳು ಇದೀಗ “ಚೌಕಿದಾರ್” ಎಂದು ಹೇಳುತ್ತಾ ಮೋದಿ ಪರ ಪ್ರಚಾರ ಮಾಡುತ್ತಿದ್ದು ಒಂದು ರೀತಿಯ ಸಂಚಲನವನ್ನೇ ಉಂಟು ಮಾಡಿದೆ. ಇದನ್ನೆಲ್ಲಾ ಕಂಡು ಮೋದಿ ವಿರೋಧಿಗಳು ತೆಪ್ಪಗಾಗಿದ್ದು ಮೋದಿ ಅಭಿಮಾನಿಗಳ ಮುಂದೆ ಮಂಡಿಯೂರಿದ್ದಾರೆ. ಕಾಂಗ್ರೆಸ್‌‌ಗೆ ಯಾವ ರೀತಿಯ ಸ್ಥಿತಿ ಬಂದಿದೆ ಎಂದರೆ ಮೋದಿಗಾಗಿ ತಾನು ತೋಡಿದ ಹಳ್ಳದಲ್ಲಿ ತಾನೇ ಬಿದ್ದು ಇದೀಗ ಹೊರಳಾಡುವಂತಾಗಿದೆ. ಮೋದಿಯನ್ನು ಎಷ್ಟೇ ಟೀಕಿಸಿದರು ಮೋದಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಗುತ್ತಲೇ ಇದ್ದು ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.!

No comments:

Post a Comment