Thursday, February 28, 2019

ಕುಮಾರ್ ಅಣ್ಣ ನಿಮ್ಮ ಅಪ್ಪಾಜಿ ಅಲ್ಲ ನನ್ನ ಅಪ್ಪಾಜಿ ಎಲೆಕ್ಷನ್ ಗೆ ನಿಂತಿದ್ರು ನಾನು ವೋಟ್ ಹಾಕೋದು ಮೋದಿ ಜಿ ಗೆ, ಸುಮ್ಮನೆ ವೋಟ್ ಕೇಳೋಕ್ಕೆ ಬಂದು ಸಮಯ ಹಾಳು ಮಾಡಿಕೊಳ್ಳಬೇಡಿ..

ಕನ್ನಡಿಗರು ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಕರ್ನಾಟಕದಲ್ಲಿ ಗೆಲ್ಲಿಸಿದರೆ ದೇಶಕ್ಕೆ ಕನ್ನಡಿಗನೇ ಪ್ರಧಾನಿ

ಮಂಡ್ಯ: ಈ ದೇಶದಲ್ಲಿ ಮತ್ತೊಮ್ಮೆ ಕನ್ನಡಿಗರೊಬ್ಬರು ಪ್ರಧಾನಿಯಾಗುವ ಅವಕಾಶವಿದೆ. ಜನತೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅದು ಸಾಕಾರವಾಗಲಿದೆ,” ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗಬಹುದು ಎಂದು ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆ.

ಮಂಡ್ಯದಲ್ಲಿ 5 ಸಾವಿರ ಕೋಟಿಗಳಿಗೂ ಮಿಗಿಲಾದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವೇಳೆ ಪ್ರಧಾನಿ ಸ್ಥಾನದ ಕುರಿತು ಮಾತನಾಡಿದರು. “1996ರಲ್ಲಿ ಕರ್ನಾಟಕದಲ್ಲಿ ಜನತಾದಳದ 16 ಸಂಸದರು ಗೆದ್ದಿದ್ದರು. ಆಗ ದೇವೇಗೌಡರು ಪ್ರಧಾನಿಯಾದರು. ಈ ಬಾರಿಯೂ ಅಂಥದ್ದೇ ಸನ್ನಿವೇಶ ಸೃಷ್ಟಿಯಾಗಿದೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ 20-22 ಅಭ್ಯರ್ಥಿಗಳನ್ನು ಕನ್ನಡಿಗರು ಗೆಲ್ಲಿಸಿದರೆ ಮತ್ತೊಮ್ಮೆ ದೆಹಲಿಯಲ್ಲಿ ಕನ್ನಡಿಗನ ಧ್ವನಿ ಕೇಳಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ ಯಾವುದೇ ಅವಘಡಗಳು ನಡೆದಿಲ್ಲ. ಆದರೆ ಈಗ ಪದೇ ಪದೇ ಭಯೋತ್ಪಾದಕ ಘಟನೆಗಳು‌ ನಡಿಯುತ್ತಿವೆ. ಈಗಿನ ಪ್ರಧಾನಿ ಕೇವಲ ಮನ್ ಕೀ ಬಾತ್ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ,” ಎಂದು ಮೋದಿಯನ್ನು ಟೀಕಿಸಿದರು.

No comments:

Post a Comment