ಒಬ್ಬ ವ್ಯಕ್ತಿಯನ್ನು ಯಾರೂ ಮೂಸಿ ನೋಡುವುದಿಲ್ಲ ಎಂದು ತಿಳಿದಾಗ ಹೇಗಾದರೂ ತನ್ನ ಹೆಸರು ಚಾಲ್ತಿಯಲ್ಲಿರುವಂತೆ ಮಾಡಲು ಯಾವ ಕಸರತ್ತು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಕಾಂಗ್ರೆಸ್ ನಾಯಕಿ, ನಟಿ ರಮ್ಯಾ. ನಟಿಯಾಗಿದ್ದಾಗ ಸ್ವಲ್ಪ ಹೆಸರು ಗಳಿಸಿದ್ದ ರಮ್ಯಾ ರಾಜಕೀಯಕ್ಕೆ ಬಂದ ನಂತರ ಯಾರೊಬ್ಬರೂ ಮೂಸಿ ನೋಡುತ್ತಿಲ್ಲ, ಆದರೂ ತಾನು ನಾಯಕಿ ಎಂದು ಹೇಳಿಕೊಳ್ಳುವ ಈಕೆ ಕಳೆದ ಬಾರಿ ಪಾಕಿಸ್ತಾನವನ್ನೇ ಸ್ವರ್ಗ ಎಂದು ಹೇಳಿ ತನ್ನ ಅಸಲಿ ದೇಶಪ್ರೇಮ ಏನೆಂಬುದನ್ನು ಪ್ರದರ್ಶಿಸಿದ್ದರು. ಸದ್ಯ ನಮ್ಮ ದೇಶದ ಜನರಿಗೆ ಅಸಲಿ ಯಾವುದು ನಕಲಿ ಯಾವುದು ಎಂಬುದನ್ನು ತಿಳಿಯುವಷ್ಟು ಸಾಮಾರ್ಥ್ಯ ಇದೆ ಎಂಬುದು ಈ ರಮ್ಯಾಳಿಗೆ ತಿಳಿದಿಲ್ಲ ಅನ್ನಿಸುತ್ತೆ.
ಯಾಕೆಂದರೆ ಭಾರತದ ವಿರುದ್ಧ ಪದೇ ಪದೇ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ಈಕೆಯ ಪಾಲಿಗೆ ಸ್ವರ್ಗ ಎಂದಾದರೆ ಈಕೆ ನಮ್ಮ ದೇಶವನ್ನು ಎಷ್ಟರ ಮಟ್ಟಿಗೆ ದ್ವೇಷಿಸುತ್ತಾರೆ ಎಂಬುದು ಅರಿವಾಗುತ್ತದೆ. ಅಷ್ಟಕ್ಕೂ ಇದರಲ್ಲಿ ರಮ್ಯಾಳ ತಪ್ಪೇನೂ ಇಲ್ಲ, ಯಾಕೆಂದರೆ ಕಾಂಗ್ರೆಸ್ ಸೇರಿದರೆ ಆತ ದೇಶದ್ರೋಹಿ ತನವನ್ನು ಮೈಗೂಡಿಸಿಕೊಂಡು ಬರಲೇಬೇಕು ಅಲ್ವೇ. ಇಲ್ಲಿ ನಡೆದಿದ್ದೂ ಅಷ್ಟೇ, ಆದರೆ ಜನರು ಜೀವಿಸಲು ಯೋಗ್ಯವಾದ ಸ್ಥಳಗಳ ಪೈಕಿ ಆಯ್ಕೆಯಾದ ಮಂಗಳೂರು ನಗರವನ್ನು ನರಕ ಎಂದು ರಾಕ್ಷಸರೇ ತುಂಬಿರುವ ಪಾಕಿಸ್ತಾನವನ್ನು ಸ್ವರ್ಗ ಎಂದವಳು ಈಗ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶಪ್ರೇಮದ ಪಾಠ ಹೇಳಲು ಬಂದಿದ್ದಾಳೆ.!
ಇದು ನಿಜಕ್ಕೂ ನಾಚಿಕೆಕೇಡಿನ ಸಂಗತಿ, ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರ ದೇಶಪ್ರೇಮ ಎಂಥದ್ದು ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಹೇಳಿಕೊಂಡಿದ್ದಾರೆ. ರಾಜಕೀಯವಾಗಿ ದ್ವೇಷಿಸುವವರೂ ಕೂಡ ವೈಯಕ್ತಿಕವಾಗಿ ನರೇಂದ್ರ ಮೋದಿಯವರನ್ನು ಪ್ರೀತಿಸುತ್ತಾರೆ ಗೌರವಿಸುತ್ತಾರೆ ಎಂದರೆ ಅದಕ್ಕೆ ಕಾರಣ ಮೋದಿಯವರ ದೇಶಪ್ರೇಮ. ಭಾರತದ ಸೈನಿಕರ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಮೋದಿ ಸೇನೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಕೂಡ ನಡೆಸಿ ನಮ್ಮ ದೇಶದ ವಿಚಾರಕ್ಕೆ ಬಂದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟ ಸಂದೇಶ ಕೂಡ ರವಾನೆ ಮಾಡಿದ್ದ ಮೋದಿಗೆ ಇದೀಗ ರಮ್ಯಾ ದೇಶಪ್ರೇಮದ ಪಾಠ ಮಾಡಲು ಬಂದಿದ್ದಾರೆ.
ಭಾರತದ ಓರ್ವ ಪೈಲೆಟ್‌ನನ್ನು ಪಾಕಿಸ್ತಾನ ಬಂಧಿಸಿರುವ ವಿಚಾರ ಸದ್ಯ ಜಗತ್ತಿಗೆ ಗೊತ್ತಿದೆ. ಅದೇ ರೀತಿ ಬಂಧಿಸಲ್ಪಟ್ಟ ಕಮಾಂಡರ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರಲು ಮೋದಿ ಸರಕಾರ ಕೂಡ ಪ್ರಯತ್ನ ನಡೆಸುತ್ತಿದೆ ಮಾತ್ರವಲ್ಲದೆ ಇಡೀ ದೇಶವೇ ಕಮಾಂಡರ್ ಅಭಿನಂದನ್‌ಗಾಗಿ ಪ್ರಾರ್ಥಿಸುತ್ತಿದೆ. ಆದರೆ ಈ ಮಧ್ಯೆ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ರಮ್ಯಾ ಮತ್ತೆ ತನ್ನ ಹಳೇ ಛಾಳಿ ಮುಂದುವರಿಸಿದ್ದಾರೆ. ನಾಪತ್ತೆಯಾದ ಕಮಾಂಡರ್‌ನನ್ನು ವಾಪಸ್ ಪಡೆಯುವ ಬಗ್ಗೆ ಪ್ರಧಾನಿ ಮೋದಿ ಯಾವ ಕ್ರಮ ಕೈಗೊಂಡಿದ್ದಾರೆ ಮತ್ತು ಇನ್ನೂ ನಿದ್ರಿಸುತ್ತಿದ್ದಾರಾ ಎಂದು ಪ್ರಶ್ನಿಸಿದ್ದರು. ರಮ್ಯಾಳ ಈ ಮಾತು ಸರಿಯಾಗಿ ನೋಡಿದರೆ ಅರ್ಥ ಆಗುತ್ತದೆ ಏನೆಂದರೆ ಈಕೆಗೆ ಒಂದಲ್ಲ ಒಂದು ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಇರಬೇಕು ಮತ್ತು ಅದರಿಂದ ತನ್ನ ಹೆಸರು ಚಾಲ್ತಿಯಲ್ಲಿರುವಂತೆ ಮಾಡಬಹುದು ಎಂದು.
ನಿಜಕ್ಕೂ ರಮ್ಯಾ ಈ ದೇಶದ ಪ್ರಜೆ ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಯಾಕೆಂದರೆ ಸೈನಿಕರ ವಿಚಾರದಲ್ಲಿ ತನ್ನ ರಾಜಕೀಯ ಲಾಭ ಗಳಿಸುವ ಈಕೆ ಪ್ರಧಾನಿ ಮೋದಿಗೆ ಪ್ರಶ್ನೆ ಕೇಳುವ ನೈತಿಕತೆ ಕೂಡ ಇಲ್ಲ ಎಂದು ಹೇಳಬಹುದು. ಪ್ರಧಾನಿ ಮೋದಿ ಏನೇ ಮಾಡಿದರೂ ಅದರಲ್ಲಿ ಏನಾದರೂ ತನ್ನ ಲಾಭಕ್ಕೆ ಸಿಗಬಹುದೇ ಎಂದು ಕಾಯುತ್ತಿರುವ ರಮ್ಯಾಳ ಪ್ರಶ್ನೆಗೆ ಉತ್ತರಿಸುವ ಅಗತ್ಯ ಕೂಡ ಇಲ್ಲ. ಯಾಕೆಂದರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ?
ಆದರೂ ರಾಜಕೀಯವನ್ನು ಸೈನಿಕರ ವಿಚಾರಕ್ಕೆ ಎಳೆದು ತರುವ ಇಂತವರು ಪಾಕಿಸ್ತಾನವನ್ನು ಸ್ವರ್ಗ ಎಂದು ಕರೆಯುವುದರಲ್ಲಿ ತಪ್ಪೇನೂ ಇಲ್ಲ..!
No comments:
Post a Comment